ಕರ್ನಾಟಕ

ರೈತರ ಹೆಸರಿನಲ್ಲಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ; ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ

ಮಹಾಂತೇಶ ಇರಳಿ


ಬೆಳಗಾವಿ- ನಾಳೆ ಕರ್ನಾಟಕ ಬಂದ್ ಕೈಬಿಡಬೇಕು. ಕಾಂಗ್ರೆಸನವರು ಮುಗ್ಧ ರೈತರನ್ನ ಬಳಸಿಕೊಳ್ಳುತ್ತಿದೆ ಬಿಜೆಪಿ ರೈತ ಮೊರ್ಚಾ ರಾಜ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಿಡಿಕಾರಿದ್ದಾರೆ.

ಭಾನುವಾರ ಬೆಳಗಾವಿಯ ಬಿಜೆಪಿ ಗ್ರಾಮೀಣ ಕಚೇರಿಯಲ್ಲಿ ಪ್ರೇಸ್ಮೀಟನಲ್ಲಿ ಮಾತನಾಡಿದ ಅವರು, ಲೋಕಸಭಾ, ರಾಜ್ಯಸಭಾ 25 ಮಸೂದೆ ಅಂಗೀಕಾರ ಆಗಿದೆ. ಕೃಷಿ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ. ಎರಡು ಕಾನೂನು ವಿಧಯೇಕಕ್ಕೆ ಸ್ವಾಗತ. ಕಾಂಗ್ರೆಸ್ ಮುಗ್ಧ ರೈತನ್ನು ಬಳಸಿಕೊಂಡು ಧರಣಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.ಇನ್ನೂ‌ ಕಾನೂನು ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಹೋರಾಟ ಮಾಡಲಾಗುತ್ತಿದೆ. ಭೂ ಸುಧಾರಣೆ ಕಾನೂನು ಮೂಲಕ ಜನರಿಗೆ ಅನುಕೂಲ ಆಗಲಿದೆ. ಕೃಷಿ ಎತರರು ಕೃಷಿ ಭೂಮಿಯನ್ನು ಖರೀದಿ ಮಾಡಬಹುದು.‌ಹೈನುಗಾರಿಕೆ, ಕುರಿ ಸಾಗಾಣಿಕೆಗೆ ಅನಕೂಲ ಆಗಲಿದೆ. ಕೃಷಿಯನ್ನು ಬೇರೆ ಯಾರೋ ಬಂದು ಕಸಿದುಕೊಳ್ಳುತ್ತಾರೆ ಅನ್ನೋದು ಸುಳ್ಳು. ಅನೇಕರು ಕೃಷಿಯತ್ತ ಮತ್ತೆ ಮುಖ ಮಾಡಿದ್ದಾರೆ.
ವಿದ್ಯಾವಂತ ಯುವಕರು ಕೃಷಿ ಕಡೆ ಮುಖ ಮಾಡುತ್ತಿದ್ದಾರೆ.
ಇಂತಹ ಯುವಕರಿಗೆ ಮತ್ತಷ್ಟು ಜಮೀನು ಖರೀದಿಗೆ ಅನಕೂಲ ಆಗಲಿದೆ ಎಂದರು.


ಕರ್ನಾಟಕ ಇದಕ್ಕೆ ಅನಕೂಲ ಕಲ್ಪಿಸದೇ ಇದ್ರೆ ಯುವಕರು ಬೇರೆ ರಾಜ್ಯಕ್ಕೆ ಹೋಗುತ್ತಾರೆ.
ಜಮೀನಿನ ಮೌಲ್ಯ ಹೆಚ್ಚಾಗಲಿದೆ. 11.90 ಲಕ್ಷ ಹೆಕ್ಟೇರ್ ಬೀಳು ಭೂಮಿ ರಾಜ್ಯದಲ್ಲಿ ಇದೆ. ಹೊಸ ಜನ ಕೃಷಿಯತ್ತ ಮುಖ ಮಾಡಿದ್ರೆ ಹೆಚ್ಚಿನ ಅನಕೂಲ. ಕೃಷಿ ಎತರರು ಭೂಮಿ ಖರೀದಿಯಿಂದ ಕೈಗಾರಿಕಾಗೆ ಅನಕೂಲ ಆಗಲಿದೆ.
ರೈತರಿಗೆ ಪರವಾಗಿ ಕಾನೂನು ರೂಪಿಸಲಾಗಿದೆ.‌ ರೈತರ ಹೆಸರಿನಲ್ಲಿ ಕಾಂಗ್ರೆಸ್ ಹೋರಾಟವನ್ನು ಮಾಡುತ್ತಿದೆ.
ಎಪಿಎಂಸಿಯಲ್ಲಿ ರೈತರ ಶೋಷಣೆ ತಪ್ಪಿಸಲು ಕಾಯ್ದೆ ತಿದ್ದುಪಡಿ. ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ. ಕೃಷಿ ಕ್ಷೇತ್ರದಲ್ಲಿ ಕಾಂತ್ರಿಕಾರಿ ಬೆಳವಣಿ ಇದರಿಂದ ಸಾಧ್ಯ. ಹೀಗಾಗಿ ಕರ್ನಾಟಕ ಬಂದ್ ವಾಪಸ್ ಪಡೆಯಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಮುಖಂಡ ರಾಜು ಚಿಕ್ಕನ್ನಗೌಡರ ಸೇರಿ ಹಲವರು ಇದ್ದರು.


Related Articles

Leave a Reply

Your email address will not be published. Required fields are marked *

Back to top button
error: Content is protected !!