ಬಲವಂತ ಬಂದಗೆ ಅವಕಾಶವಿಲ್ಲ ಎಸ್ಪಿ ಲಕ್ಷ್ಮಣ ನಿಂಬರಗಿ ಖಡಕ್ ಎಚ್ಚರಿಕೆ

ಮಹಾಂತೇಶ ಇರಳಿ
ಬೆಳಗಾವಿ-ಕರ್ನಾಟಕ ಬಂದ್ ಶಾಂತಿಯುವಾಗಿ ಇರಲಿ. ಬಲವಂತದ ಬಂದ ಗೆ ಅವಕಾಶವಿಲ್ಲ. ರಸ್ತೆ ತಡೆ ನಡೆಸಿದ್ರೆ ಹುಷಾರ್ ಅಂತಾ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾಳೆ ಕರ್ನಾಟಕ ಬಂದ ಹಿನ್ನೆಲೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು,
ನಾಳೆ ಕರ್ನಾಟಕ ಬಂದ್ ನೆಪದಲ್ಲಿ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದರೇ ಹುಷಾರ್. ನಿಮ್ಮ ಪ್ರತಿಭಟನೆಗೆ ನಮ್ಮ ಯಾವ ಹಸ್ತ ಕ್ಷೇಪ ಇಲ್ಲ . ಆದರೇ ಕಾನೂನು ಚೌಕಟ್ಟಿನಲ್ಲಿ ಶಾಂತಯುತ ಪ್ರತಿಭಟನೆ ಮಾಡಿ . ನಾವು ಈಗಾಗಲೇ ಠಾಣಾ ಮಟ್ಟದಲ್ಲಿ ಎಲ್ಲ ಮುಖಂಡರನ್ನು ಕರೆಸಿ ಸೂಚನೆ ನೀಡಿದ್ದೇವೆ. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನ ಆಗಿರಿಲಿ. ರಸ್ತೆ ತಡೆ ಮಾಡಿ ಪ್ರಯಾಣಿಕರಿಗೆ ತೊಂದರೆ ಕೋಡುವುದು.
ಇನ್ನಿತರ ಯಾವುದೇ ಅಹಿತಕರ ಘಟನೆ ನಡೆದರೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಯಾದ್ಯಂತ 4000ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಮನೆ ಅಳವಡಿಸಲಾಗಿದೆ. ಅಗತ್ಯ ಸ್ಥಳದಲ್ಲಿ ಡ್ರೋಣ ಕ್ಯಾಮರಾ ಕೂಡ ಬಳಿಸಲಾಗುವುದು. ಕೋವಿಡ್ ಗೈಡ್ ಲೈನ್ಸ ಅಡಿಯಲ್ಲಿ ಶಾಂತಯುತವಾಗಿ ಪ್ರತಿಭಟಿಸಿ ಮನವಿ ನೀಡಲು ಬೆಳಗಾವಿಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಸೂಚಿಸಿದ್ದಾರೆ.