ಮತ್ತೆ ಹುಟ್ಟಿ ಬಾ ಕೊಗಿಲೆ…

ಮಹಾಂತೇಶ ಇರಳಿ
ಬೆಳಗಾವಿ- ಹಾಡು ನಿಲ್ಲಿಸಿದ ಗಾನ ಕೊಗಿಲೆ.. 40 ಸಾವಿರ ಹಾಡುಗಳ ಸರದಾರನನ್ನ ನೆನೆದು ಗಾಯನಲೋಕ ಕಣ್ಣೀರು ಹಾಕುತ್ತಿದೆ. ದೇಹವನ್ನ ತೇಜಿಸಿದ್ದರೂ ಅವರ ಆತ್ಮ, ಅವರ ಹಾಡಿದ ಹಾಡುಗಳು ನಮ್ಮೇಲ್ಲರ ಎದೆಯಲ್ಲಿ ತುಂಬಿಕೊಂಡಿವೆ. ಮತ್ತೆ ಹುಟ್ಟಿ ಬಾ ಕೊಗಿಲೆ ಅಂತಾ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರಿಟುತ್ತಾ ಹರಿಸುತ್ತಿದ್ದಾರೆ.
ಹೌದು.. ಒಂದು ತಿಂಗಳಿನಿಂದ 100 ಕೋಟಿ ಭಾರತೀಯರ ಪ್ರಾರ್ಥಣೆ ಫಲಸಲಿಲ್ಲ. ಯಾಕೆಂದ್ರೆ ಕಳೆದ 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೊರೊನಾದಿಂದ ತತ್ತರಿಸಿದ ಜೀವ ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆ ನಿಧನರಾಗಿದ್ದಾರೆ.
ಕನ್ನಡ, ತೆಲಗು, ತಮಿಳು, ಹಿಂದೆ ಸೇರಿ 6 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನ ಹಾಡಿದ್ದ ಜೀವ ತನ್ನ ಉಸಿರು ನಿಲ್ಲಿಸಿದೆ. ಕಣ್ಣಿಗೆ ಕಾಣದ ನಾಟಕಕಾರ ಈ ಜಗತ್ತಿನ ಜೊತೆಗಿನ ಬಂಧನದ ಪಯಣವನ್ನ ನಿಲ್ಲಿಸಿದ್ದಾರೆ. ಶ್ರೀಪತಿ ಪಂಡಿತಾರಾದ್ಯಲು ಬಾಲಸುಬ್ರಹ್ಮಣ್ಯಂ ಅವರ ಪೂರ್ತಿ ಹೆಸರು. ಎಸ್.ಪಿ.ಬಿ. ಎಂಬ ದೇಶದ ಕಂಡ ಅದ್ಭುತ ಸ್ವರ ಮಾಂತ್ರಿಕ, ಗಾನ ಗಾರುಡಿ ನಮ್ಮೇಲ್ಲರ ಕಣ್ಣಿನಿಂದ ಕಣ್ಣ್ಮರೆಯಾಗಿದ್ದಾರೆ.
ಇನ್ನು ಎಸಪಿಬಿ ಅವರು ಕೊರೊನಾ ಪಾಸಿಟಿವ್ ಬಂದಿದ್ದರಿಂದ ವೈದ್ಯರ ಸಲಹೆಯಂತೆ ಆಗಸ್ಟ್ ಮೊದಲ ವಾರದಲ್ಲಿ ಚೆನ್ನೈನ ಎಂ.ಜಿ.ಎಂ. ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಎಸ್.ಪಿ.ಬಿ. ಸಂಪೂರ್ಣ ಗುಣಮುಖರಾಗಿ ಮರಳುತ್ತೇನೆ ಎನ್ನುವ ಸಂದೇಶವನ್ನ ತನ್ನ ಕೊನೆಯ ವಿಡಿಯೋ ವ್ಯಕ್ತಪಡಿಸಿದ್ದರು. ಆಸ್ಪತ್ರೆ ವೈದ್ಯರು ಎಸಪಿಬಿ ಗುಣಮುಖಗೊಳಿಸಲು ಎಲ್ಲಾ ರೀತಿಯ ಪ್ರಯತ್ನವನ್ನ ಮಾಡಿದ್ದರು. ತಂದೆಗೆ ಧೈರ್ಯ ತುಂಬುವ ಕಾರ್ಯವನ್ನ ಪುತ್ರ ಆಸ್ಪತ್ರೆಯಲ್ಲಿದ್ದುಕೊಂಡು ಮಾಡುತ್ತಿದ್ದರು. ಅಲ್ಲದೇ ದೇಶದ ಜನತೆಗೆ ತಂದೆಯ ಆರೋಗ್ಯದ ಕುರಿತ ಮಾಹಿತಿಯನ್ನ ಪುತ್ರ ಹಂಚಿಕೊಳ್ಳುತ್ತಿದ್ದರು.
ಈಗ ಎಸಪಿಬಿ ಅಜರಾಮವಾಗಿದ್ದಾರೆ. ಎಸಪಿಬಿ ನಾವು ಚಿತ್ರರಂಗ ಅಷ್ಟೇ ಅಲ್ಲದೇ ಎಲ್ಲರಿಗೂ ಶಾಕ್ ನೀಡಿದೆ. ಎಸಪಿಬಿ ಅಭಿಮಾನಿಗಳು ಕಣ್ಣೀರಿನಲ್ಲಿ ಮತ್ತೆ ಹುಟ್ಟಿಬಾ ಕೊಗಿಲೆ ಅಂತಾ ಆ ದೇವರನ್ನ ಪ್ರಾರ್ಥಿಸುತ್ತಿದ್ದಾರೆ.