ಬೆಳಗಾವಿ ಪೊಲೀಸರ ಕಮಾಲ್;5 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಮಹಾಂತೇಶ ಇರಳಿ
ಬೆಳಗಾವಿ– ಗಾಂಜಾ ದಂಗೆಕೋರರ ವಿರುದ್ಧ ಬೆಳಗಾವಿ ಕಮೀಷನರೇಟ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.
ಒಂದೇ ದಿನ ಮೂರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ 5 ಲಕ್ಷ ಮೌಲ್ಯದ 27 ಕೆಜಿ ಗಾಂಜಾ ವಶ ಪಡೆಸಿಕೊಂಡಿದ್ದು, 13 ಜನ ಗಾಂಜಾ ಆರೋಪಿಗಳನ್ನ ಬಂಧಿಸಿದ್ದಾರೆ.
ಹೌದು.. ಬೆಳಗಾವಿ ಜಿಲ್ಲೆ ಗಡಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ಸಂಪರ್ಕಿಸುವ ಸೇತುವೆ ಆಗಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಟಾರ್ಗೆಟ್ ಮಾಡಿ ಗಾಂಜಾ ಮತ್ತು ಸಾಗಾಟ ಮಾಡುತ್ತಿದ್ದರನ್ನ ಸದೇಬಡಿಯುವ ಕಾರ್ಯಕ್ಕೆ ಪೊಲೀಸರು ಕೈ ಹಾಕಿದ್ದಾರೆ.
ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ್ ಅಮಟೆ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನೂ ಸಿಸಿಬಿ ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸಂಜೀವ ಕಾಂಬಳೆ ನೇತೃತ್ವದ ಪೊಲೀಸರ ತಂಡು ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಗರದ ಹೋಲಸೇಲ್ ಹಣ್ಣಿನ ಮಾರುಕಟ್ಟೆ ಬಳಿ 15 ಕೆಜಿ 500 ಗ್ರಾಂ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇತ್ತ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆ ಇನ್ಸ್ಪೆಕ್ಟರ್ ಬಿ.ಆರ.ಗಡ್ಡೇಕರ ನೇತೃತ್ವದ ಪೊಲೀಸರ ತಂಡವೂ ಆಟೋ ನಗರದ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 5 ಕೆಜಿ 690 ಗ್ರಾಂ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನೂ ಬೆಳಗಾವಿ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟೀಮನಿ ಮಾರ್ಗದರ್ಶನದಲ್ಲಿ ಎಪಿಎಂಸಿ ಇನ್ಸ್ಪೆಕ್ಟರ್ ಜಾವೇದ ಮುಶಾಪುರಿ ನೇತೃತ್ವದ ಪೊಲೀಸರ ತಂಡವೂ ಕಾರ್ಯಾಚರಣೆ ನಡೆಸಿದ್ದು, ಮಹಾರಾಷ್ಟ್ರ ದಿಂದ ಗಾಂಜಾ ಸಾಗಿಸುತ್ತಿದ್ದ 4 ಜನ ಆರೋಪಿಗಳನ್ನ ಅರೇಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 6 ಕೆಜಿ 28 ಗ್ರಾಂ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿಂದ ಬೆಳಗಾವಿ ಪೊಲೀಸ್ ಕಮೀಷನರ್ ತ್ಯಾಗರಾಜನ , ಡಿಸಿಪಿ ಡಾ. ವಿಕ್ರಮ್ ನೇತೃತ್ವದಲ್ಲಿ ಗಾಂಜಾ ಸೇರಿದಂತೆ ಅಕ್ರಮಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ನಡೆಸಿ ಗಾಂಜಾ ದಾಳಿಯಲ್ಲಿ ಒಟ್ಟು 27 ಕೆಜಿ ಗಾಂಜಾ ಜಪ್ತಿ ಮಾಡಿ, 13 ಜನ ಆರೋಪಿಗಳನ್ನ ಬಂಧಿಸಿ, 11 ಮೊಬೈಲ್, 1 ಕಾರ್, 3 ಬೈಕ ಸೇರಿ 15 ಸಾವಿರ ರುಪಾಯಿ ನಗದು ಮೊತ್ತವನ್ನ ವಶ ಪಡೆಸಿಕೊಂಡಿದ್ದಾರೆ. ಈ ಕುರಿತು ಆಯಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆಯನ್ನ ಪೊಲೀಸರು ಮುಂದೊರೆಸಿದ್ದಾರೆ.