ಜಿಲ್ಲಾ
ಕೇಂದ್ರ ಸಚಿವ ಅಂಗಡಿ ಕಳೆದುಕೊಂಡು ಬಡವರಾಗಿದ್ದೇವೆ; ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಕಂಬನಿ

ಮಹಾಂತೇಶ ಇರಳಿ
ಬೆಳಗಾವಿ-ಕೇಂದ್ರ ಸಚಿವ ಸುರೇಶ್ ಅಂಗಡಿ ಅವರನ್ನ ನಾವು ಕಳೆದುಕೊಂಡು ನಾವೇಲ್ಲರೂ ಬಡವರಾಗಿದ್ದೇವೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕಂಬನಿ ಮಿಡದಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆ ನಿವಾಸದಲ್ಲಿ ಮಾತನಾಡಿದ ಅವರು, 2003ರಿಂದ ಸುರೇಶ್ ಅಂಗಡಿ ನನಗೂ ಪರಿಚಯವಿತ್ತು.
ನನ್ನ ಪಕ್ಕದ ಊರೇ ಸುರೇಶ್ ಅಂಗಡಿ ಅವರದ್ದು. ಕಳೆದ ವರ್ಷ ಪ್ರವಾಹ ಬಂದಾಗ ನಾನು ಗದಗ ಡಿಸಿ ಆಗಿದ್ದೆ. ಆಗ ಹೊಳೆ ಆಲೂರು ರೈಲ್ವೆ ನಿಲ್ದಾಣ ದಲ್ಲಿ 2 ಸಾವಿರ ಜನರು ಇದ್ದರು. ಆಗ ಸುರೇಶ್ ಅಂಗಡಿಯವರಿಗೆ ಒಂದು ರೈಲಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇ. ಎರಡು ಗಂಟೆಯಲ್ಲಿ ರೈಲಿನ ವ್ಯವಸ್ಥೆ ಕಲ್ಪಿಸಿದ್ದರು. ಬೆಳಗಾವಿ ಅಭಿವೃದ್ಧಿ ಗೆ ಒತ್ತು ನೀಡಿದ್ದರು.
ರೈಲು ಯೋಜನೆಗಳು, ರಿಂಗ್ ರಸ್ತೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದರು. ಇವತ್ತ ಅವರನ್ನ ಕಳೆದುಕೊಂಡು ಬಡವರಾಗಿದ್ದೇವೆ ಎಂದು ಡಿಸಿ ಹಿರೇಮಠ ಸುರೇಶ್ ಅಂಗಡಿ ಜೊತೆಗಿನ ಒಡನಾಟ ಸ್ಮರಿಸಿಕೊಂಡರು.