ಅಥಣಿ ಪೊಲೀಸರ ಭರ್ಜರಿ ಬೇಟೆ;ಲಕ್ಷಾಂತರ ಮೌಲ್ಯದ ಗಾಂಜಾ ವಶ

ಮಹಾಂತೇಶ ಇರಳಿ
ಅಥಣಿ- ಅಥಣಿ ಪೊಲೀಸರು ಭರ್ಜನಿ ಬೇಟೆಯಾಡಿದ್ದಾರೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಆರೋಪಿ ಜಮೀನಲ್ಲಿದ್ದ 2 ಲಕ್ಷ 70 ಸಾವಿರ ಮೌಲ್ಯದ 18 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದೊರೆಸಿದ್ದಾರೆ.
ಅದರಲ್ಲೂ ಗಡಿ ಜಿಲ್ಲೆ ಬೆಳಗಾವಿಯಿಂದ ಸಾಕಷ್ಟು ಗಾಂಜಾ ಸಾಗಾಟ ಮಾಡಲಾಗುತ್ತಿದೆ ಮತ್ತು ಅನಧಿಕೃತವಾಗಿ ಹೋಲದಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಬೆಳಗಾವಿ ಜಿಲ್ಲಾ ಪೊಲೀಸರು ಕಲೆ ಹಾಕಿ ತಮ್ಮ ರೆಡ್ ಮಾಡುತ್ತಿದ್ದಾರೆ.
ಈಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಕರೆಪ್ಪ ಐನಾಪುರೆ ಎಂಬಾತನನ್ನ ಅಥಣಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಥಣಿ ಪೊಲೀಸರು ಆರೋಪಿಯಿಂದ ಲಕ್ಷಾಂತರ ಮೌಲ್ಯದ ಗಾಂಜಾವನ್ನ ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಯು ತನ್ನ ಹೋಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಿ, ಅದನ್ನ ಮಾರಾಟ ಮಾಡುಲ ಕಿತ್ತುಕೊಂಡು ತನ್ನ ಮನೆ ಆವರಣದಲ್ಲಿ ಇಟ್ಟುಕೊಂಡಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಅಥಣಿ ಪೊಲೀಸರು ಅಕ್ರಮ ಚಟುವಟಿಕೆಗಳನ್ನ ಮಟ್ಟಹಾಕಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಥಣಿ ಡಿಎಸ್ಪಿ ಎಸ.ವಿ ಗಿರೀಶ್, ಸಿಪಿಐ ಶಂಕರಗೌಡಾ ಬಸನಗೌಡರ, ಪಿಎಸಐ ಕುಮಾರ ನೇತೃತ್ವದಲ್ಲಿ ಅಥಣಿ ಠಾಣೆ ಸಿಬ್ಬಂದಿಗಳಾದ ಎಂ.ಚ ದೊಡಮನಿ , ಎ. ಎ. ಈರಕರ , ಕೆ.ಬಿ ಶಿರಗೂರ, ಎಸ್.ಜಿ. ಮನ್ನಾಪೂರ ಒಳಗೊಂಡ ತಂಡವೂ ಕಾರ್ಯಾಚರಣೆ ನಡೆಸಿದೆ. ಭರ್ಜರಿ ಬೇಟೆಯಾಡಿದ ಅಥಣಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಅಮರನಾಥ ರೆಡ್ಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕಾರ್ಯಚರಣೆ ನಡೆಸಿದ ಪೊಲೀಸರ ತಂಡಕ್ಕೆ ನಗದು ಬಹುಮಾನದ ರಿವಾರ್ಡ್ ಕೂಡಾ ಲಭಿಸಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮುಂದಿನ ತನಿಖೆಯನ್ನ ಪೊಲೀಸರು ಕೈಗೊಂಡಿದ್ದಾರೆ.