ಜಿಲ್ಲಾ
ಬೆಳಗಾವಿ ಜಿಲ್ಲೆಯಲ್ಲಿ2195 ಕೊರೊನಾ ಆಕ್ಟಿವ್ ಕೇಸ್

ಮಹಾಂತೇಶ ಇರಳಿ
ಬೆಳಗಾವಿ-ಕೊರೊನಾ ರಣಕೇಕೆ ಬೆಳಗಾವಿ ಜಿಲ್ಲೆಯಲ್ಲಿ ಮುಂದೊರೆದಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ 151 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ 2195 ಕೊರೊನಾ ಕೇಸ್ ಆಕ್ಟಿವ್ ಆಗಿವೆ.
.ಕರ್ನಾಟಕ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದೊರೆದಿದೆ. ಅದರಲ್ಲೂ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಕೊರೊನಾ ಹೊಡೆತಕ್ಕೆ ಜನರು ಸಂಪೂರ್ಣ ತತ್ತರಿಸಿ ಹೋಗಿದ್ದಾರೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ 268 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈವರೆಗೂ 17826 ಜನರು ಕೊರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ 15363 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದ್ರು ಕಿಲ್ಲರ್ ಕೊರೊನಾ ಅಟ್ಟಹಾಸ ಮಾತ್ರ ನಿಂತಿಲ್ಲ.