ಬಿಜೆಪಿ ನಿಷ್ಠರಿಗೆ ಹೊಸ ಜವಾಬ್ದಾರಿ

ಮಹಾಂತೇಶ ಇರಳಿ
ಅಥಣಿ- ಅಥಣಿ ಚಿಕ್ಕೋಡಿ ಜಿಲ್ಲಾ ಅಥಣಿ ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ವಾಗತ ಹಾಗೂ ಅಭಿನಂದನಾ ಸಮಾರಂಭವೂ ಭಾನುವಾರ ಅಥಣಿ ಪಟ್ಟಣದ ಆರ್.ಎಚ್.ಕುಲಕರ್ಣಿ ಸಭಾಭವನದಲ್ಲಿ ನಡೆಯಿತು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಮಂಡಲ ಅಧ್ಯಕ್ಷರು ಡಾ.ರಾಜೇಶ ನೇರ್ಲಿ ಮಾತನಾಡಿ, ಎಲ್ಲರೂ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಬೂತಮಟ್ಟದಲ್ಲಿ ಜನರ ಕುಂದುಕೊರತೆಗಳನ್ನು ಆಲಿಸುವದರ ಮೂಲಕ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸುವ ಕೆಲಸ ಮಾಡಬೇಕು.ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಅನ್ನುವದನ್ನ ತೋರಿಸಿಕೊಡುವ ಅಗತ್ಯವಿದೆ. ಪಕ್ಷವು ಸಾಮಾನ್ಯ ಕಾರ್ಯಕರ್ತರ ಗುರುತ್ತಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಆನಂದ ದೇಶಪಾಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ ಹಾಗೂ ನಿಂಗಪ್ಪ ಖೋಕಲೆ ಮತ್ತು ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ್, ರೈತ ಮೋರ್ಚಾ ಅಧ್ಯಕ್ಷ ಧರೆಪ್ಪ ಠಕ್ಕಣ್ಣವರ,ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಶ್ರೀಶೈಲ ಶಲ್ಲೆಪ್ಪಗೊಳ,ಅಥಣಿ ಬಿಜೆಪಿ ಮಂಡಲ ಅಧ್ಯಕ್ಷ ಅಣ್ಣಾಸಾಬ ನಾಯಕ,ಯುವ ಮೋರ್ಚಾ ಉಪಾದ್ಯಕ್ಷ ಪ್ರದೀಪ ಬಡಿಗೇರ, ಎಸ್, ಸಿ.ಮೋರ್ಚಾದ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಪಟ್ಟಣ, ಹಾಗೂ ಅಥಣಿ ಎಸ್.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಶ ಕಾಂಬಳೆ ಮತ್ತು ಅಥಣಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಶ್ರೀಶೈಲ ನಾಯಿಕ, ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಅಜಿತ ಪವಾರ,ಬಸವರಾಜ ಬಿರಾದಾರ,ಮತ್ತು ಯುವ ಮೋರ್ಚಾ ಖಜಾಂಚಿ ಅನೀಲ ಮೋರೆ, ಗಣೇಶ ಪೂಜೇರಿ, ಅನೀಲ ಬೋಸ್ಲೆ, ಸೇರಿದಂತೆ ಅನೇಕರು ಇದ್ದರು.