ಬಡವರ ಅಕ್ಕಿಗೆ ಕನ್ನ ಹಾಕಿದವರು ಅರೇಸ್ಟ್

ಬೆಳಗಾವಿ- ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದ ಮೂವರು ಖದಿಮರನ್ನ ಪೊಲೀಸರು ಬೇಟೆ ಆಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಠಾಣೆ ಸಿಪಿಐ ಯು.ಎಚ.ಸಾತೇನಹಳ್ಳಿ ನೇತೃತ್ವದ ಪೊಲೀಸರ ತಂಡ ಭರ್ಜರಿ ಬೇಟೆಯಾಡಿದೆ.
ಬಡವರಿಗೆ ಸೇರ ಬೇಕಿದ್ದ ಪಡಿತರ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ
ಬೆಳಗಾವಿ ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಹುಬ್ಬಳ್ಳಿಯ ಕಾಳ ಸಂತೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಮೂರು ಅರೇಸ್ಟ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೈಲಹೊಂಗಲ ರಸ್ತೆಯ ಗದ್ದಿಕರವಿನಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು ಹುಬ್ಬಳ್ಳಿ ಮೂಲದ ಮೂವರು ಆರೋಪಿಗಳಾದ ಲಾರಿ ಚಾಲಕ ಜಮಾಲಖಾನ್ ಫಠಾಣ, ದಿಲಾವರಖಾನ್ ಪಠಾಣ, ಪಡಿತರ ಅಕ್ಕಿ ಮಾಲೀಕ ಮಂಜುನಾಥ ಹರ್ಲಾಪುರ್ ಬಂಧಿಸಿದ್ದಾರೆ. ಬಂಧಿತರಿಂದ 5ಲಕ್ಷ ಮೌಲ್ಯದ 500 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಅಲ್ಲದೇ ಹಳೆ ಹುಬ್ಬಳ್ಳಿ ಬಂಕಾಪುರ ಚೌಕ್ ಗೋಡಾವನ್ ಇದ್ದ 2 ಲಕ್ಷ. 39 ಸಾವಿರ ಮೌಲ್ಯದ 239 ಅಕ್ಕಿ ಚೀಲ ಜಪ್ತಿ ಮಾಡಲಾಗಿದೆ.
ಈ ಪೊಲೀಸ್ ಕಾರ್ಯಾಚರಣೆಯಲ್ಲಿ ಒಟ್ಟು 50 ಕೆಜಿಯ 739 ಅಕ್ಕಿ ಚೀಲದ ಒಟ್ಟು ಮೌಲ 7 ಲಕ್ಷ 39 ಸಾವಿರ ಹಾಗೂ 8 ಲಕ್ಷ ಮೌಲ್ಯದ ಲಾರಿ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಈ ಕುರಿತು ಬೆಳಗಾವಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.